ಪ್ರಚಲಿತ ಪೋಸ್ಟ್ಗಳು

ಎಸ್.ಎಸ್.ಎಲ್.ಸಿ ರಸಪ್ರಶ್ನೆ ಕಾರ್ಯಕ್ರಮ

ವೃಕ್ಷಸಾಕ್ಷಿ,,  ರಸಪ್ರಶ್ನೆಗಾಗಿ   ಚಿತ್ರದ ಮೇಲೆ ಕ್ಲಿಕ್ಕಿಸಿ

Showing posts with label ಕನ್ನಡ ಸಣ್ಣ ಕತೆಗಳು. Show all posts
Showing posts with label ಕನ್ನಡ ಸಣ್ಣ ಕತೆಗಳು. Show all posts

Saturday, June 13, 2020

ಕನ್ನಡ ಸಣ್ಣ ಕತೆಗಳು

    ಕಾದಂಬರಿಯ ತರುವಾಯ ಸಣ್ಣ ಕಥೆಯೇ ಅತ್ಯಂತ ಜನಪ್ರಿಯವಾದ ಪ್ರಕಾರ. ಕನ್ನಡದಲ್ಲಿ ಸಣ್ಣಕಥೆ ಒಂದು ವಿಶಿಷ್ಟ ರೂಪವಾಗಿ ಜನ್ಮ ತಾಳಿದುದು ಸುಮಾರು ನೂರು ವರ್ಷಗಳ ಹಿಂದೆ. 
  • ಕನ್ನಡದಲ್ಲಿ ಸಣ್ಣಕಥೆಗೆ ವಿಶಿಷ್ಟ ರೂಪ ಕೊಟ್ಟವರು, ಚಾರಿತ್ರಿಕವಾಗಿ ಮೊಟ್ಟ ಮೊದಲು ಕಥೆಗಳನ್ನು ಬರೆದವರು ಪಂಜೆ ಮಂಗೇಶರಾಯರು. ನಂತರ ಕೆರೂರ ವಾಸುದೇವಾಚಾರ್ಯರು, ಎಂ.ಎನ್.ಕಾಮತರು ಇವರೆಲ್ಲ ಆರಂಭದಲ್ಲಿ ಸಣ್ಣ ಕಥೆಗಳನ್ನು ಬರೆದವರು. ಸುವಾಸಿನಿ ಪತ್ರಿಕೆಯಲ್ಲಿ ಪ್ರಕಟವಾದ ಪಂಜೆ ಮಂಗೇಶರಾಯರ ನನ್ನ ಚಿಕ್ಕತಾಯಿ (1900) ಕನ್ನಡದ ಮೊದಲ ಸಣ್ಣ ಕಥೆ ಎಂದು ಭಾವಿಸಲಾಗಿದೆ.
  • ಅನಂತರದಲ್ಲಿ ಅವರು ನನ್ನ ಚಿಕ್ಕ ತಂದೆ (1902), ಭಾರತ ಶ್ರವಣ (1902), ಕಮಲಪುರದ ಹೋಟ್ಲಿನಲ್ಲಿ (1902) ಮೊದಲಾದ ಉತ್ತಮ ಕಥೆಗಳನ್ನು ಪ್ರಕಟಿಸಿದರು. ಆದರೆ ಇವರಾರೂ ಅದೊಂದು ಸಾಹಿತ್ಯ ಪ್ರಕಾರವೆಂಬ ಪ್ರಜ್ಞೆಯನ್ನು ಮೂಡಿಸಿರಲಿಲ್ಲ. ಆ ಪ್ರಜ್ಞೆ ಯನ್ನು ಮೂಡಿಸಿ ಅದನ್ನೇ ಮಾಧ್ಯಮವನ್ನಾಗಿ ಬಳಸಿದವರಲ್ಲಿ ಶ್ರೀನಿವಾಸರು (ಮಾಸ್ತಿ) ಮೊದಲಿಗರು. ಇವರು ಸಣ್ಣಕಥೆಯ ಜನಕರೆಂಬ ಹೆಸರಿಗೆ ಪಾತ್ರರಾದವರು.
  • ಇವರ ವಸ್ತುವಿನ ಆಯ್ಕೆ, ದೃಷ್ಟಿ, ತಿಳಿಹಾಸ್ಯ, ಸರಳಶೈಲಿ - ಇವು ಕನ್ನಡ ಕಥಾಲೋಕಕ್ಕೆ ಮಾರ್ಗದರ್ಶಕವಾಗಿವೆ. ಇವರ ಕಥೆಗಳು ಅನೇಕ ಸಂಪುಟಗಳಲ್ಲಿವೆ. ರಂಗಪ್ಪನ ದೀಪಾವಳಿಯಿಂದ ಹಿಡಿದು ಇವರ ಎಲ್ಲ ಕಥೆಗಳಲ್ಲಿ ಕಾಣುವುದು ಸಾಮಾನ್ಯ ಘಟನೆಗಳನ್ನು ಉತ್ಪ್ರೇಕ್ಷೆಯಿಲ್ಲದೆ ಹೇಳುವ ಕಲೆ. ಇವರ ಕಥೆಗಳಲ್ಲಿ ಆವೇಶವಿಲ್ಲ, ಚಮತ್ಕಾರವಿಲ್ಲ, ವಿಸ್ಮಯವಿಲ್ಲ; ಉದಾತ್ತಗುಣಗಳಿಂದ ತುಂಬಿದ ಆತ್ಮದ ಒಂದು ಚೇತನವನ್ನು ಕಾಣುತ್ತೇವೆ.
  • ಇವರ ಇಂದಿರೆಯೋ ಅಲ್ಲವೋ? ಬೀದಿಯಲ್ಲಿ ಹೋಗುವ ನಾರಿ, ನಮ್ಮ ಮೇಷ್ಟ್ರು, ರಂಗಸ್ವಾಮಿಯ ಅವಿವೇಕ, ಇವುಗಳಲ್ಲಿ ಸಣ್ಣಕಥೆಯ ಎಲ್ಲ ಸಲ್ಲಕ್ಷಣಗಳನ್ನೂ ಕಾಣಬಹುದು. ಇವರಲ್ಲಿ ಸಾಮಾಜಿಕ, ಪೌರಾಣಿಕ, ಐತಿಹಾಸಿಕ ಎಲ್ಲ ಬಗೆಯ ಕಥೆಗಳೂ ಇವೆ. ಸಾಮಾಜಿಕ ಕಥೆಗಳಲ್ಲಿ ಜೀವನಶ್ರದ್ಧೆ ಕಂಡರೆ ಐತಿಹಾಸಿಕ, ಪೌರಾಣಿಕ ಕಥೆಗಳಲ್ಲಿ ಗುಪ್ತಗಾಮಿನಿಯಾಗಿ ಹರಿಯುವ ಸಂಸ್ಕೃತಿ ಪ್ರವಾಹವನ್ನು ಕಾಣಬಹುದು.
  • ಬಾದಷಹನ ದಂಡನೆ, ಪಂಡಿತನ ಮರಣಶಾಸನ ಇವುಗಳಲ್ಲಿ ರಾಜಕೀಯ ಜೀವನ ಕಂಡರೆ ನಿಜಗಲ್ಲಿನ ರಾಣಿ, ಗೊಂಡೆಯ ಕೃಷ್ಣಮೂರ್ತಿ ಕಥೆಗಳಲ್ಲಿ ನಾಡಿನ ಹೆಣ್ಣುಮಕ್ಕಳ ದೀರೋದಾತ್ತ ಚಿತ್ರಗಳನ್ನು ಕಾಣಬಹುದು. ಆಚಾರ್ಯರ ಪತ್ನಿ, ಹೇಮಕೂಟದಿಂದ ಬಂದಮೇಲೆ, ಮಸುಮತಿ, ಗೌತಮಿ ಹೇಳಿದ ಕಥೆ ಇವುಗಳಲ್ಲಿ ವಸ್ತುವಿನ ಆಯ್ಕೆಯ ಅನನ್ಯತೆಯನ್ನು ಕಾಣಬಹುದು.